ನಾಳೆಯಿಂದ ಡಿಕೆ ತೆರೆಗೆ
Posted date: 12 Thu, Feb 2015 – 04:20:25 PM

ನಾಳೆಯಿಂದ  ಡಿಕೆ ಸಾಹೇಬ ಕರ್ನಾಟಕದ ಬಹುತೇಕ ಚಿತ್ರ ಮಂದಿರಗಳಿಗೆ ಅಡಿಯಿರಿಸುತ್ತಿದ್ದಾನೆ. ನಿರ್ದೇಶಕರಾಗಿ ಜನಪ್ರಿಯತೆ ಗಳಿಸಿಕೊಂಡಿರುವ ಪ್ರೇಮ್ ಅವರು ಹೀರೋ ಆಗಿರುವ ಈ ಚಿತ್ರದ ಬಗ್ಗೆ ಈಗಾಗಲೇ ಭಾರೀ ಕುತೂಹಲ ಕೆರಳಿಕೊಂಡಿದೆ. ಕಥೆಯಿಂದ ಮೊದಲ್ಗೊಂಡು ಪ್ರತಿಯೊಂದು ವಿಚಾರದಲ್ಲಿಯೂ ಕೌತುಕ ಕಾಯ್ದುಕೊಂಡಿರುವ ಈ ಚಿತ್ರ ಪ್ರೇಮ್ ಪಾಲಿಗೆ ಹೊಸಾ ತಿರುವು ನೀಡಲಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ನಟಿ ಹಾಗೂ ಪ್ರೇಮ್ ಅವರ ಮಡದಿ ರಕ್ಷಿತಾ ಅವರೇ ಈ ಚಿತ್ರದ ನಿರ್ಮಾಪಕಿಯೂ ಆಗಿರೋದರಿಂದ ಎಲ್ಲಿಯೂ ಕೊರತೆಯಾಗದಂತೆ ಈ ಚಿತ್ರ ಅತ್ಯಂತ ಅದ್ದೂರಿಯಾಗಿ ಮೂಡಿ ಬಂದಿದೆ. ಜೆಜೆ ಸಿನಿ ಕಂಬೈನ್ಸ್ ಲಾಂಛನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಬಾಲಿವುಡ್ ಮಟ್ಟದಲ್ಲಿ ಬಹುಬೇಡಿಕೆ ಹೊಂದಿರುವ ಸನ್ನಿ ಲಿಯೋನ್ ಒಂದು ಹಾಡಿನಲ್ಲಿ ಕುಣಿದಿರೋದೂ ಸೇರಿದಂತೆ ಡಿಕೆ ಸಾಹೇಬ ಹಲವಾರು ಹೊಸಾ ಪ್ರಯೋಗಗಳೊಂದಿಗೆ ಅಡಿಯಿರಿಸುತ್ತಿದ್ದಾನೆ.
ವಿಜಯ್ ಹಂಪಾಳಿ ಈ ಚಿತ್ರದ ನಿರ್ದೇಶನವನ್ನು ಪ್ರೇಮ್ ಅವರ ಅದ್ದೂರಿತನಕ್ಕೆ ತಕ್ಕ ರೀತಿಯಲ್ಲಿಯೇ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಇನ್ನುಳಿದಂತೆ ಚೈತ್ರ ಈ ಚಿತ್ರದ ನಾಯಕಿಯಾಗಿ ವಿಭಿನ್ನವಾದ ಪಾತ್ರ ನಿಭಾಯಿಸಿದ್ದಾರೆ.  ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಸುದರ್ಶನ್ ಅವರು ಅವರು ಮೂರು ಹಾಡುಗಳನ್ನು ರಿಚಿಸಿದ್ದಾರೆ. ಆನಂದ್, ಮಾಸ್ ಮಾಧ, ಶ್ರೀ ನಿವಾಸ್ ಪಿ ಬಾಬು, ನಾಗೇಶ್, ಪ್ರಭು, ಭದ್ರಿ, ಡ್ಯಾನಿ, ಬಾಬು, ಸೋಮು, ಮಂಜು, ರವಿ ತಾಂತ್ರಿಕ ವರ್ಗದಲ್ಲಿ ಹಾಗೂ ಸಹಾಯಕರಾಗಿ ಜೊತೆಯಾಗಿದ್ದಾರೆ.
 ‘ಆಬ್ ಕಿ ಬಾರ್ ಮೇರೆ ಸರ್ಕಾರ್ ಎನ್ನುವ ‘ಡಿ ಕೆ ಚಿತ್ರವನ್ನು ‘ಜೆಜೆ ಸಿನಿ ಪ್ರೊಡಕ್ಷನ್ನ ಗ್ಲೆನ್ ಡಿಯಸ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ. ಪ್ರೇಮ್ ಅವರಿಗೆ ಚೈತ್ರ ಜೋಡಿಯಾಗಿ ನಟಿಸಿದ್ದಾರೆ.  ಮಾತ್ರವಲ್ಲದೆ, ಶೋಭರಾಜ್, ಶರತ್ ಲೋಹಿತಾಶ್ವ, ಋಷಿಕುಮಾರ ಸ್ವಾಮೀಜಿ ಹಾಗೂ ಇತರರು ತಾರಾ ಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed